ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಓದುತ್ತಿದ್ದೇನೆ. ಮೇಲ್ವರ್‍ಗದ,ಮೇಲ್ಜಾತಿಯ ಬಹುತೇಕ ಮಂದಿ ಕಾಣದ ಮತ್ತು ಕಾಣಬಯಸದ ಜಗತ್ತನ್ನು ತೆರೆದಿಡುವ ಪುಸ್ತಕ ಇದು..ಇಲ್ಲಿ ಆಳುವವರ ಬಗ್ಗೆ ಆಕ್ರೋಶವಿದೆ,ಆದರೆ ಅದು ಸಿದ್ಧಲಿಂಗಯ್ಯನವರ ಕವನಗಳಲ್ಲಿರುವಂತೆ ಕೊಚ್ಚು,ಮುರಿ ಅನ್ನುವಂಥದ್ದಲ್ಲ..ಬದಲಿಗೆ ಸಮಾನತೆಯ ಕನಸನ್ನು ಪ್ರತೀ ಕ್ಷಣವೂ ಕಾಣುವಂಥದ್ದು.. ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಕೀಳು ಮನಸ್ಸಿನಿಂದ ಇನ್ನಾದರೂ ಹೊರಬರೋಣ ಎನ್ನುವಂಥದ್ದು...ಧರ್ಮದ ನೆಲಗಟ್ಟಿನ ಮೇಲೆ ದೇಶ ಕಟ್ಟಲು ಹೊರಟಿರುವ ಕುರುಡರ ಸಂತೆಯ ಮಧ್ಯೆ ಈ ಕಾರಣಕ್ಕಾಗಿಯೇ ದೇವನೂರು ಅತ್ಯಗತ್ಯವೆನಿಸುತ್ತಾರೆ...
ದೇವನೂರು ನಮ್ಮ ನಡುವಿನ ಶ್ರೇಷ್ಠ ಸಾಹಿತಿ, ಚಿಂತಕ ಹಾಗು ಮನುಷ್ಯ. ಅವರ ಸಾಹಿತ್ಯವು ಬದುಕಿನ ವೈರುಧ್ಯಗಳನ್ನು ಉದ್ವೇಗದ ಬಣ್ಣವಿಲ್ಲದೆ ಚಿತ್ರಿಸುತ್ತದೆ.
ReplyDeleteexactly..
ReplyDelete