January 15, 2014

ನಾನಿಲ್ಲಿ ಹೀಗೆ ಗೀಚುತ್ತಿರುವಾಗಲೇ
ಅಲ್ಲಿ
ಅವಳ ಕನಸು
ಅವನ ಸೆಮಿನಾರು
ಹಾರುವ ನೊಣ
ಕಾಣದ ಗಾಳಿ
ಉದುರುವ ಎಲೆ
ಬೀಸಿದ ಕಲ್ಲು
ತಪ್ಪುವ ಗುರಿ
ಒಡೆಯಲಿರುವ ಗಾಜು...
ಎಲ್ಲ ಹಾಗೇ ಇರುವಾಗ
ಹೇಳು
ಫಿಲಾಸಫಿ ಕ್ಲಾಸಿನಲ್ಲಿ
ನೀನು ಹೇಳಿದಂತಾಗಲು
ನನಗೆ ಹೇಗೆ ಸಾಧ್ಯ?!

1 comment:

  1. ಖರೇ ಅದ. ನಾವೂ ಅದೇ ಚೌಕಟ್ಟಿನ ಭಾಗವೇ ಅಲ್ಲವೆ?

    ReplyDelete