March 16, 2014

(ಅರ್ಧರಾತ್ರಿಯ ತಾತ್ಕಾಲಿಕ ಲಹರಿಯಿಂದ...!)

ಬರೆದೆಲ್ಲ ಸಾಲುಗಳು
ನಿನ್ನೊಳಗೇ ಅವಿತಂತೆ
ಅಕ್ಷರಗಳ ಕೋರಿಕೆಗೆ
ನಗುವೊಂದು ಹೊಳೆದಂತೆ
ಕ್ಷಣ ಕ್ಷಣವೂ ಹನಿಗೂಡಿ
ತೃಪ್ತ ತೊರೆ ಹರಿದಂತೆ
ಕಿರುಬೆರಳ ಅಪ್ಪುಗೆಗೆ
ಜಗವೆ ತಂಪಾದಂತೆ
ಕಲ್ಪನೆಯ ತೇವದಲಿ
ಸಿಕ್ಕಿಬಿಡು ಒಮ್ಮೆ,
ವಾಸ್ತವದ ಮೊಳಕೆಯಲಿ
ಉಸಿರಾಡುವೆ...
ಕೇಸರಿಗಳು ಬಂಡಾಯ ಕವನ
ತಪ್ಪಿಯೂ ಓದೋದಿಲ್ಲ,
ಅಕ್ಷರಗಳು ಮೊನಚು
ರಾಮನ ಬಾಣಕ್ಕಿಂತ!

**************

ಅಪ್ಪಿ ಮಲಗಿವೆ ಚಪ್ಪಲಿಗಳು
ದೇಗುಲದ ಹೊರಗೆ,
ಯಾರ್ಯಾರದರ ಜೊತೆ
ಯಾರ್ಯಾರದೋ!
ಅಕ್ೞರದ ಬೇರು
ನೆಟ್ಟವನೂ ಕಂಡಿಲ್ಲ!

*********

ನಗೋದು ಕೂಡ
ಅಪರಾಧ
ಎಲ್ಲ ಅಳುವಾಗ!

*********

ಅಸ್ತಿತ್ವಕ್ಕೆ ಚಪಲ
ಕವಿತೆಗೆ
ಹೊಟ್ಟೆಪಾಡು...

March 2, 2014

ಡೊಂಕು ಅಕ್ಷರಗಳ
ಅಸಂಗತತೆ ಕಂಡು
ಮರೆಯಲ್ಲಿ ನಗುತಿದೆ
ಬೀರನ ಹೆಬ್ಬೆಟ್ಟು!

*************

ಮನುಷ್ಯನನ್ನು
ಕೃತಕವಾಗಿಸಿದ್ದು
ವಿದ್ಯೆ!
ಶಾಲೆ ಚೆನ್ನಾಗಿಲ್ಲ
ರೋಡು ಸರಿಯಿಲ್ಲ
ಕರೆಂಟು ಸಾಕಾಗೊಲ್ಲ
ಸಿಲೆಂಡರು ಸಿಗೋದಿಲ್ಲ
ಷೇರಿನ ರೇಟು ಏರೋದಿಲ್ಲ
ದಿನಸಿ ದರ ಇಳಿಯೋದಿಲ್ಲ
ದೇಶ ಉದ್ಧಾರವಾಗೋದಿಲ್ಲ...
ಬೀಪಿ ಮಾತ್ರೆ ದಿನವೂ ನುಂಗಿದ
ದೊಳ್ಳು ಹೊಟ್ಟೆ ದುಡ್ಡಪ್ಪ,
ಬೀಡಿ ಎಳೆಯುತ ಹಲ್ಲುಗಿರಿದ
ದನ ಮೇಯಿಸೋ ಬೀರಪ್ಪ!

February 27, 2014

ಕಾಗದ ಅಂದರೆ
ಅಕ್ಷರ
ಕವಿತೆ
ಜ್ಞಾನ ಮಣ್ಣು ಮಸಿ
ಅಂದುಕೊಂಡಿದ್ದೆ,
ವಾಸನೆ-
ಯೆಂದು ಗೊತ್ತಾಗಿದ್ದು
ದಾಂಡೇಲಿಯಲ್ಲಿ!
ಕವನ 'ಹೀಗಿರಬೇಕು'
ಅಂದವನಲ್ಲಿ
ಫ್ಯಾ‌ಸಿಸ್ಟ್ ಕಂಡ!
ಪೇಟೇಲಿ ಜೀವದ ಬೆಲೆ
ಧಿಡೀರ್ ಕುಸಿಯಲಿದೆ
ಮಾರೋದಿದ್ದರೆ
ಬೇಗ ಮಾರಿಬಿಡಿ!

************

ಉಚ್ಚೆಯಿಂದ ಓಡುವ
ಕಾರು ಇದೆಯಂತೆ,
ಬಾವೀಲಿ
ಪೆಟ್ರೋಲು ಕಾಣ್ತದಾ ನೋಡಿ!